Home

ನೀರು ಅಮೂಲ್ಯ ಮಿತವಾಗಿ ಬಳಸಿ, ಜನನ-ಮರಣ ನೋಂದಣಿ ಕಡ್ಡಾಯ, ನಗರವನ್ನು ಶುಚಿಯಾಗಿ ಇಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ, ಸ್ವಯಂ ಘೋಷಿತ ಆಸ್ತಿ ತೆರಿಗೆ ಕಡ್ಡಾಯ.



Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011         



ಹೊಸಕೋಟೆ ಪುರಸಬಾ ವ್ಯಾಪ್ತಿಯಲ್ಲಿ, ಬೇಸಿಗೆಯಲ್ಲಿ ನೀರಿನ ಅಭಾವ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಶ್ರೀಮತಿ.ಎನ್.ಪೂರ್ಣಿಮಾ, ಕಿರಿಯ ಅಭಿಯಂತರರು, (ಮೊಬೈಲ್ ಸಂಖ್ಯೆ 9945302426, ಕಛೇರಿ ದೂರವಾಣಿ ಸಂಖ್ಯೆ - 080-27931221 ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆಗಳಿಗೆ ಇವರನ್ನು ಸಂಪರ್ಕಿಸಬಹುದಾಗಿರುತ್ತದೆ.


ಹೊಸಕೋಟೆ ಸ್ಥಳೀಯ ಸಂಸ್ಥೆಯು 1906ರಲ್ಲಿ ಸ್ಥಾಪನೆಯಾಯಿತು. ಹೊಸಕೋಟೆ ಪುರಸಭೆಯು ಬೆಂಗಳೂರು-ಚೆನೈ ರಾಷ್ಟೀಯ ಹೆದ್ದಾರಿ-4 ರಲ್ಲಿ ಬೆಂಗಳೂರಿನಿಂದ 27 ಕಿ.ಮೀ. ದೂರದಲ್ಲಿದೆ.  ಈ ಪಟ್ಟಣದಲ್ಲಿ 2001ರ ಸಮೀಕ್ಷೆಯಂತೆ ಜನಸಂಖ್ಯೆಯು ಸುಮಾರು 36,364 ಇರುತ್ತದೆ. ಹೊಸಕೋಟೆ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಸದಸ್ಯರು ಇರುತ್ತಾರೆ. ಹೊಸಕೋಟೆ ಪುರಸಭೆಯನ್ನು ಒಂದು ಮಾದರಿ ಪುರಸಭೆಯೆಂದು ಮಾನ್ಯ ಮಾಜಿ ಮುಖ್ಯಮಂತ್ರಿಯವರಾದ ಶ್ರೀ.ಎಸ್.ಎಂ.ಕೃಷ್ಣ ರವರು ದಿನಾಂಕ 04-06-2000 ರಂದು ಬಿರುದು ನೀಡಿರುತ್ತಾರೆ. ಹೊಸಕೋಟೆಯಲ್ಲಿ ಎಂ.ವಿ.ಜೆ ವಿಜ್ಞಾನ ಸಂಶೋಧನ ಕೇಂದ್ರವು ವಿದ್ಯಾರ್ಥಿಗಳಿಗೆ ಹೊಸ ಪ್ರಯೋಗಗಳನ್ನು ನಡೆಸಲು ಹಾಗೂ ಉತ್ತಮ ತರಬೇತಿ ನೀಡಲು ಪ್ರಸಿದ್ದವಾಗಿದೆ. ಎಂ.ವಿ.ಜೆ ಮೆಡಿಕಲ್ ಕಾಲೇಜು ಹಾಗೂ ಚಿಕಿತ್ಸಾ ಕೇಂದ್ರವು ಒಂದು ಮಾದರಿ ಕೇಂದ್ರವಾಗಿದೆ. ಇದಲ್ಲದೆ ಹೊಸಕೋಟೆಯ ಸುತ್ತ-ಮುತ್ತ ಹಲವಾರು ಕೈಗಾರಿಕೆಗಳು ಇದ್ದು ಉದ್ಯೋಗಾಂಕ್ಷಿಗಳಿಗೆ ಉತ್ತಮ ತಾಣವಾಗಿದೆ. ಹೊಸಕೋಟೆ ಟೌನ್ ತರಕಾರಿ ಬೆಳೆಗೆ ಪ್ರಸಿದ್ಧಿಯಾಗಿದೆ.
Hosakote TMC was established in the year 1906. It is situated along the Bangalore-Kolar Highway NH-4, at a distance of 27 Kms from Bangalore. Town has a population of 36,364 as per 2001 Census.TMC has  23 wards and equal number of Councilors.Many factories and industries are situated in Hosakote town surroundings and they have created many job oppurtunities. M.V.J. Medical college and Research centre is one of the Popular College & Hospital in Hosakote town.

ಗಣಕೀಕರಣ : ಹೊಸಕೋಟೆ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1998 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.  

Computerisation : Properties within Hosakote TMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1998. Citizens can make use of this facility to register & obtain Birth & Death Certificates.


 

 

No. Of Visitors :
Last Updated   : 23/01/2012  Release History
Release 2.0.0, Powered By Karnataka Municipal Data Society & maintained by Hosakote TMC
This website can best viewed with the resolution 1024 * 768 using Internet Explorer 7.0 or above.
Valid CSS!